ಬ್ಲಾಗ್ ಬರೆಯಲು ಮೊದಲ ಪ್ರಯತ್ನ. ಹೊಸತನ್ನು ಕಲಿಯುವ ಆಸೆ. ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಹಂಬಲ. ಕಾಲ ಉರುಳಿದಂತೆ ಬದುಕು ಬದಲಾಗಲಾರಂಭಿಸಿತು. ನಾಲ್ಕು ಗೋಡೆಗಳ ಒಳಗಿನ ಅನುಭವ ಸಾಕೆನ್ನದೇ, ಹೊರ ಜಗತ್ತನ್ನು ಕಾಣಲು ಹಾತೊರೆದಿದೆ ಈ ಮನ. ಯಶಸ್ಸಿನೆಡೆಗೆ ನೂರಾರು ದಾರಿ. ಯಾವ ದಾರಿ ಸೂಕ್ತವಾಗಿದೆ ಎಂಬ ಗೊಂದಲ. ಕಾಡು ಹಾದಿ, ಬಿರಿಬಿಸಿಲ ಹಾದಿ, ಮರುಭೂಮಿ, ಮುಗಿಲು, ಮಳೆ, ಮಳೆಬಿಲ್ಲು............. |
ಕನಸಿಲ್ಲದ ಜೀವನ ವ್ಯರ್ಥ. ಕನಸು ಕಾಣದವರು ಯಾರಿಲ್ಲ ಹೇಳಿ? ಕಂಡ ಕನಸುಗಳಲ್ಲಿ ಕೆಲವನ್ನು ನೆನಪಿನ ಬುಟ್ಟಿಯಲ್ಲಿ ಹಿಡಿದಿಟ್ಟು ಕೆಲವನ್ನಾದರೂ ಸಾಕಾರಗೊಳಿಸಲು ಪ್ರಯತ್ನಿಸುವುದೇ ಜೀವನ. ಕನಸಿನ ಬೆನ್ಹಿಡಿದು ಸಾಗಿದಾಗ ಮಾತ್ರವೇ ಯಶಸ್ಸು. |