Saturday 30 April 2016

ಬ್ಲಾಗ್ ಬರೆಯಲು ಮೊದಲ ಪ್ರಯತ್ನ. ಹೊಸತನ್ನು ಕಲಿಯುವ ಆಸೆ. ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಹಂಬಲ. ಕಾಲ ಉರುಳಿದಂತೆ ಬದುಕು ಬದಲಾಗಲಾರಂಭಿಸಿತು. ನಾಲ್ಕು ಗೋಡೆಗಳ ಒಳಗಿನ ಅನುಭವ ಸಾಕೆನ್ನದೇ, ಹೊರ ಜಗತ್ತನ್ನು ಕಾಣಲು ಹಾತೊರೆದಿದೆ ಈ ಮನ. ಯಶಸ್ಸಿನೆಡೆಗೆ ನೂರಾರು ದಾರಿ. ಯಾವ ದಾರಿ ಸೂಕ್ತವಾಗಿದೆ ಎಂಬ ಗೊಂದಲ. ಕಾಡು ಹಾದಿ, ಬಿರಿಬಿಸಿಲ ಹಾದಿ, ಮರುಭೂಮಿ, ಮುಗಿಲು, ಮಳೆ, ಮಳೆಬಿಲ್ಲು.............

ಕನಸಿಲ್ಲದ ಜೀವನ ವ್ಯರ್ಥ. ಕನಸು ಕಾಣದವರು ಯಾರಿಲ್ಲ ಹೇಳಿ? ಕಂಡ ಕನಸುಗಳಲ್ಲಿ ಕೆಲವನ್ನು ನೆನಪಿನ ಬುಟ್ಟಿಯಲ್ಲಿ ಹಿಡಿದಿಟ್ಟು ಕೆಲವನ್ನಾದರೂ ಸಾಕಾರಗೊಳಿಸಲು ಪ್ರಯತ್ನಿಸುವುದೇ ಜೀವನ. ಕನಸಿನ ಬೆನ್ಹಿಡಿದು ಸಾಗಿದಾಗ ಮಾತ್ರವೇ ಯಶಸ್ಸು.

4 comments: